ಬೀದರ್ ನಗರಸಭೆಯಿಂದ ವಾಜಿಪೇಯಿ ನಗರ ವಸತಿ ಯೋಜನೆಯಲ್ಲಿ ರಾಣೆಮ್ಮ ಕಲ್ಲಪ್ಪ ಎಂಬವರಿಗೆ ಆಶ್ರಯ ಮನೆ ಮಂಜೂರಾಗಿತ್ತು. ಹೀಗಾಗಿ ಬಡಪಾಯಿ ಕಲ್ಲಪ್ಪ ಸಾಲ ಮಾಡಿ 40 ರಿಂದ 50 ಸಾವಿರ ಹಣ ಖರ್ಚು ಮಾಡಿ ಮನೆಯ ಬೇಸ್ಮೆಂಟ್ ಹಾಕಿಕೊಂಡಿದ್ದಾರೆ. ನಗರಸಭೆ ಸಿಬ್ಬಂದಿ ಮನೆಯ ಜಿಪಿಎಸ್ ಕೂಡಾ ಮಾಡಿಕೊಂಡು ಹೋಗಿದ್ದಾರೆ. ಆದ್ರೆ 10 ಸಾವಿರ ಲಂಚ ನೀಡಿಲ್ಲಾ ಎನ್ನುವ ಕಾರಣಕ್ಕೆ ಮಂಜೂರಾದ ಆಶ್ರಯ ಮನೆಯನ್ನೆ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಯಾನ್ಸಲ್ ಮಾಡಿದ್ದಾರೆ. ಆದ್ರೆ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪ ತಳ್ಳಿ ಹಾಕುತ್ತಿದ್ದು, ರಾಜೀವಗಾಂಧಿ ಗ್ರಾಮೀಣ ವಸತಿ ನಿಮಗ ಮಂಡಳಿಯವರು ಕ್ಯಾನ್ಸಲ್ ಮಾಡಿದ್ದಾರೆ ಎಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಡವರಿಗಾಗಿ ನಾವು ಸಾವಿರ ಸಾವಿರ ಮನೆಗಳನ್ನು ನೀಡುತ್ತೆವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ವಸತಿ ಸಚಿವರು ಈ ಸ್ಟೋರಿಯನ್ನು ಒಮ್ಮೆ ನೋಡಿದ್ರೆ ಫಲಾನುಭವಿಗಳಿಗೆ ನ್ಯಾಯಸಿಗಬಹುದೆಂಬ ನಿರೀಕ್ಷೆ.. ಜಿಲ್ಲೆಯ ಬಹುತೇಕ ಬಡಪಾಯಿ ಫಲಾನುಭವಿಗಳ ಕಥೆ ಇದೆ ಆಗಿದೆ.
#publictv #bidar